Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ
    • ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?
    • ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ
    • ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ
    • ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು
    • ಕೊರಾಪುಟ್‌ನಲ್ಲಿ ರಾಜ್ಯ ಬಸ್ ಕಮರಿಗೆ ಉರುಳಿ 1 ಸಾವು, 20 ಕ್ಕೂ ಹೆಚ್ಚು ಜನರಿಗೆ ಗಾಯ 
    • ಅರಣ್ಯ ಭೂಮಿಯನ್ನು ಅತಿಕ್ರಮಣ ಮಾಜಿ   ಸ್ಪೀಕರ್ ರಮೇಶ್ ಕುಮಾರ್ ಮೇಲ್ಮನವಿ ಸೋಲು,60.5 ಎಕರೆ ಭೂಮಿ  ಅರಣ್ಯಕ್ಕೆ ಹಸ್ತಾಂತರಿಸಲು  ನಿರ್ದೇಶನ
    • ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ
    Facebook X (Twitter) Instagram
    KARNIK EXPRESSKARNIK EXPRESS
    Tuesday, April 21
    • Home

      ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ

      April 17, 2026

      ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?

      April 12, 2026

      ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ

      April 12, 2026

      ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ

      April 12, 2026

      ದಕ್ಷಿಣ ಏಷ್ಯಾ ಪ್ರವಾಹ ಬಿಕ್ಕಟ್ಟು: ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನದಲ್ಲಿ 200+ ಸಾವು, ಭಾರತ ನೆರವು

      April 12, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ಜಿಲ್ಲೆ»ನಾಳೆ  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನೂತನ  ಕನ್ನಡ ಭವನ  ಲೋಕಾರ್ಪಣೆ

    ನಾಳೆ  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನೂತನ  ಕನ್ನಡ ಭವನ  ಲೋಕಾರ್ಪಣೆ

    • karnik express
    • May 26, 2025
    • 10:34 pm

    FEATURED IN

    image_processing20230220-6331-pnenon
    whatsapp-logo-icon-free-png
    images

    ನಾಳೆ  ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ನೂತನ  ಕನ್ನಡ ಭವನ  ಲೋಕಾರ್ಪಣೆಗೆ ಸಿದ್ಧತೆ ಜಿಲ್ಲಾಧಿಕಾರಿ ಪರಿಶೀಲನೆ

    ಚಿಕ್ಕಬಳ್ಳಾಪುರ:  ಜಿಲ್ಲಾ ಕನ್ನಡ ಭವನ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮಕ್ಕೆ ಜಿಲ್ಲೆಯ ಸಮಸ್ತ ನಾಗರಿಕರು ಮತ್ತು ಜನಪ್ರತಿನಿಧಿಗಳು ಆಗಮಿಸುವಂತೆ ಜಿಲ್ಲಾಧಿಕಾರಿ ಪಿ.ಎನ್. ರವೀಂದ್ರ ಅವರು ಮನವಿ ಮಾಡಿದರು.

    ಸೋಮವಾರ ನಗರದ ನೂತನ ಕನ್ನಡ ಭವನ ಕಟ್ಟಡಕ್ಕೆ ಭೇಟಿ ನೀಡಿ ಕನ್ನಡ ಭವನ ಲೋಕಾರ್ಪಣೆಗೆ ಜಿಲ್ಲಾಡಳಿತ ಕೈಗೊಂಡಿರುವ ಪೂರ್ವಸಿದ್ಧತೆ ಕಾರ್ಯಗಳನ್ನು ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

    ಚಿಕ್ಕಬಳ್ಳಾಪುರ ಜಿಲ್ಲಾ ಕೇಂದ್ರದಲ್ಲಿ ಸುಮಾರು 17.83 ಕೋಟಿ ರೂ. ವೆಚ್ಚದಲ್ಲಿ ನೂತನವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿಂಗಾರಗೊಂಡಿರುವ ಕನ್ನಡ ಭವನವು ರಾಜ್ಯದಲ್ಲಿ ಮಾದರಿಯಾದ ಕಟ್ಟಡವಾಗಿದೆ. ಆಧುನಿಕ ತಂತ್ರಜ್ಞಾನ, ಬೆಳಕಿನ ತಂತ್ರಜ್ಞಾನ ಅಳವಡಿಕೆ, ಸುಸಜ್ಜಿತ ಸೌಂಡ್ ಸಿಸ್ಟಮ್ ಹಾಗೂ ವೇದಿಕೆ ಸೌಕರ್ಯಗಳನ್ನು ಅಳವಡಿಸಲಾಗಿದೆ. ಇಂತಹ ಭವನವನ್ನು ಮೇ 27 ರಂದು ಲೋಕಾರ್ಪಣೆಗೊಳಿಸಿ ಆನಂತರ ಸದರಿ ಕಟ್ಟಡದಲ್ಲಿಯೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನವನ್ನು ಉದ್ಘಾಟಿಸಿ ಸಮ್ಮೇಳನದ ಕಾರ್ಯಕ್ರಮಗಳನ್ನು ಎರಡು ದಿನಗಳ ಕಾಲ ಸಂಭ್ರಮ ಸಡಗರದಿಂದ ಹಾಗೂ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಆದಿ ಚುಂಚನಗಿರಿ ಮಹಾಸಂಸ್ಥಾನ ಮಠದ ನಿರ್ಮಲಾನಂದ ಸ್ವಾಮೀಜಿಗಳು ವಹಿಸಲಿದ್ದಾರೆ. ಜಿಲ್ಲಾ ಉಸ್ತುವಾರಿ ಸಚಿವರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಸಂಸದರು, ಶಾಸಕರುಗಳು, ನಿಗಮ ಮಂಡಳಿಗಳ ಮುಖ್ಯಸ್ಥರು, ರಾಜ್ಯ ಮಟ್ಟದ ಅಧಿಕಾರಿಗಳು, ಜಿಲ್ಲಾಡಳಿತದ ಅಧಿಕಾರಿಗಳು ಮತ್ತು ಸಿಬ್ಬಂದಿ, ಕನ್ನಡ ಸಾಹಿತ್ಯ ಪರಿಷತ್ತಿನ ಸದಸ್ಯರು, ಪದಾಧಿಕಾರಿಗಳು, ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಕನ್ನಡ ಭವನ ನಿರ್ಮಾಣಕ್ಕೆ ಪ್ರಮುಖ ಕಾರಣಕರ್ತರಾದ ಮಾಜಿ ಮುಖ್ಯಮಂತ್ರಿಗಳು ಹಾಗೂ ಕೇಂದ್ರ ಮಂತ್ರಿಗಳಾದ ಡಾ|| ವೀರಪ್ಪ ಮೊಯ್ಲಿ ರವರನ್ನು ಸಹ ಆಹ್ವಾನಿಸಲಾಗಿದೆ.

    ಈ ಕಾರ್ಯಕ್ರಮಕ್ಕೆ ಆಗಮನಿಸುವವರಿಗೆ ಆಸನ ವ್ಯವಸ್ಥೆ, ಊಟದ ವ್ಯವಸ್ಥೆ, ಕುಡಿಯುವ ನೀರಿನ ವ್ಯವಸ್ಥೆ, ಶೌಚಾಲಯ ವ್ಯವಸ್ಥೆ ಹಾಗೂ ವೇದಿಕೆ ಕಾರ್ಯಕಲಾಪಗಳು ಸುಸೂತ್ರವಾಗಿ ನಡೆಯಲು ಬೇಕಾಗಿರುವ ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಮಾಡಿಕೊಳ್ಳಲಾಗಿದೆ. ಶಿಷ್ಟಾಚಾರ ರೀತ್ಯ ಕಾರ್ಯಕ್ರಮದ ಆಹ್ವಾನ ಪತ್ರಿಕೆಗಳನ್ನು ಮುದ್ರಿಸಿ ಗಣ್ಯರನ್ನು, ಜನಪ್ರತಿನಿಧಿಗಳನ್ನು ಆಹ್ವಾನಿಸಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನು ನಗರದ ಅಂಬೇಡ್ಕರ್ ಭವನದಿಂದ ಜಿಲ್ಲಾ ಕನ್ನಡ ಭವನದವರೆಗೂ ಅದ್ದೂರಿ ಮೆರವಣಿಗೆಯೊಂದಿಗೆ ಕರೆತರಲು ಹಾಗೂ ವೇದಿಕೆ ಕಾರ್ಯಕ್ರಮಗಳನ್ನು ಅದ್ದೂರಿಯಾಗಿ ನಡೆಸಲು ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಇಂತಹ ಕಾರ್ಯಕ್ರಮಕ್ಕೆ ಜಿಲ್ಲೆಯ ಸಂಘ ಸಂಸ್ಥೆಗಳ ಸದಸ್ಯರು, ಮುಖ್ಯಸ್ಥರು, ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಕನ್ನಡ ಅಭಿಮಾನಿಗಳು, ನಾಗರಿಕ ಬಂಧುಗಳು ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಲು ಈ ವೇಳೆ ಜಿಲ್ಲಾಧಿಕಾರಿಗಳು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಪ್ರಕಾಶ್ ಜಿ.ಟಿ. ನಿಟ್ಟಾಲಿ, ಅಪರ ಜಿಲ್ಲಾಧಿಕಾರಿ ಡಾ. ಎನ್. ಭಾಸ್ಕರ್, ಉಪ ವಿಭಾಗಾಧಿಕಾರಿ ಅಶ್ವಿನ್, ತಹಶೀಲ್ದಾರ್ ಅನಿಲ್, ತಾಲ್ಲೂಕು ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಮಂಜುನಾಥ್, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷರಾದ ಪ್ರೊ.ಕೋಡಿ ರಂಗಪ್ಪ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸಾರ್ವಜನಿಕರು ಇದ್ದರು.

    PrevMay 26, 2025ಭಾರತ ಹಾಗೂ ಪಾಕಿಸ್ತಾನ ಮಧ್ಯೆ ವಾರ್ ವಿಚಾರಕ್ಕೆ ಬೇಸರ:
    May 26, 2025ಮಂಡ್ಯದಲ್ಲಿ ವಾಹನ ತಪಾಸಣೆಯ ವೇಳೆ ಮೂರು ವರ್ಷದ ಮಗು ಸಾವು, ಸಾರ್ವಜನಿಕರ ಆಕ್ರೋಶಕ್ಕೆ ಕಾರಣNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ಕಾರು ಖಾಸಗಿ ಬಸ್‌ಗೆ ಮುಖಾಮುಖಿ ಡಿಕ್ಕಿ ಯ ಬೆಂಕಿಗೆ ಆರು ಮಂದಿ ಸಜೀವ ದಹನ

    April 17, 2026

    ಅಕ್ಷಯ ತೃತೀಯ ಯಾವಾಗ?.. ಚಿನ್ನ ಖರೀದಿಸಲು ಸರಿಯಾದ ಶುಭ ಸಮಯ ಯಾವುದು?

    April 12, 2026

    ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಬೆಂಗಳೂರಿನಲ್ಲಿ ಪದೇ ಪದೇ ವಿದ್ಯುತ್ ಕಡಿತವಾಗುತ್ತದೆ

    April 12, 2026

    ಅರುಣಾಚಲ ಪ್ರದೇಶದ ಪ್ರದೇಶಗಳಿಗೆ ‘ಕಾಲ್ಪನಿಕ ಹೆಸರುಗಳನ್ನು’ ನೀಡಿದ್ದಕ್ಕಾಗಿ ಭಾರತ ಚೀನಾವನ್ನು ಟೀಕಿಸಿದೆ

    April 12, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.