ಕಾಡಾನೆ ದಾಳಿಗೆ ಮಹಿಳೆ ಸಾವು, ಬಂಗಾರಪೇಟೆ ತಾಲೂಕಿನ ಸಾಕಾರಸನಹಳ್ಳಿ ಗ್ರಾಮದ ಬಳಿ ಘಟನೆ.
ಬಂಗಾರಪೇಟೆ : ಕಾಡಾನೆ ದಾಳಿಗೆ ಗ್ರಾಮದ ಒಂಟಿ ಮಹಿಳೆ ಸಾವು, ಇದು ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲೂಕಿನ ಸಾಕಾರಸನಹಳ್ಳಿ ಗ್ರಾಮದ ಬಳಿ ನಡೆದ ಘಟನೆ.
ಬೆಳಗಿನ ಜಾವ ಗ್ರಾಮಕ್ಕೆ ನುಗ್ಗಿದ ಒಂಟಿ ಸಲಗ ಗ್ರಾಮದ ಮಹಿಳೆ ಮಂಜುಳಾ (45) ರೈತ ಮಹಿಳೆಯನ್ನು ತುಳಿದು ಹೋಗಿದೆ. ಕಾಡಾನೆ ದಾಳಿಗೆ ಸಿಕ್ಕ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಳೆ.
ಬೆಳಗಿನ ಜಾವ ನಾಲ್ಕು ಗಂಟೆ ವೇಳೆಯಲ್ಲಿ ಜಮೀನಿಗೆ ತೆರಳುವಾಗ ಈ ಘಟನೆ ನಡೆದಿದೆ ಎಂದು ಗ್ರಾಮಸ್ಥರು ತಿಳಿಸುತ್ತಾರೆ.
ಹಲವು ವರ್ಷಗಳಿಂದ ಸಾಕಾರಸನಹಳ್ಳಿ ಗ್ರಾಮಸ್ತರನ್ನ ಕಾಡ್ತಿರುವ ಒಂಟಿ ಆನೆ ಗ್ರಾಮದ ಹೊರವಲಯದಲ್ಲಿರುವ ಬಾಳೆ ತೋಟಕ್ಕೆ ನಗ್ಗಿ ರೈತರ ಬೆಳೆದ ಬೆಳೆಯನ್ನು ನಾಶ ಮಾಡಿ ಹೋತ್ತಿರುತ್ತಾವೆ
ಈ ಬಗ್ಗೆ ಅರಣ್ಯ ಇಲಾಖೆ ಗಮನಕ್ಕು ಹಲವಾರು ಬಾರಿ ತಂದರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಗ್ರಾಮಸ್ಥರ ಆಕ್ರೋಶ ವ್ಯಕ್ತಪಡಿಸಿದರು.
ಘಟನಾ ಸ್ಥಳಕ್ಕೆ ಸ್ಥಳಕ್ಕೆ ಕಾಮಸಮುದ್ರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದರು.
ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸುವಂತೆ ಗ್ರಾಮಸ್ತರ ಪಟ್ಟು
ಸ್ಥಳಕ್ಕೆ ಬಂಗಾರಪೇಟೆ ಶಾಸಕ ಎಸ್ ಎನ್ ನಾರಾಯಣಸ್ವಾಮಿ ಭೇಟಿ ನೀಡಿ ಗ್ರಾಮಸ್ಥರೊಂದಿಗೆ ಮಾತನಾಡಿ ಮುಂದಿನ ದಿನಗಳಲ್ಲಿ ಕಾಡಾನೆ ಕಾಟ ಬಾರದಂತೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಗ್ರಾಮಸ್ತರ ದೂರು ಆಲಿಸಿದ ಶಾಸಕ ನಾರಾಯಣಸ್ವಾಮಿ, ಮೃತ ಮಹಿಳೆ ಮಂಜುಳಾ ಮೃತದೇಹ ಮರಣೋತ್ತರ ಪರೀಕ್ಷೆಗೆ ರವಾನೆ ಅರಣ್ಯ ಇಲಾಖೆಯಿಂದ ಬರಬೇಕಾದ ಪರಿಹಾರವನ್ನು ಶೀಘ್ರವೇ ಕೊಡುಸುವುದಾಗಿ ಭರವಸೆ ನೀಡಿದ್ದಾರೆ.
