ಕೋಲಾರ :ನನ್ನ ಜಮೀನಿನ ಒಂದು ಗುಂಟೆಯೂ ಅರಣ್ಯಕ್ಕೆ ಹೋಗಲ್ಲ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಹೇಳಿಕೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಭೂಮಿ ವಿವಾದ ಕುರಿತು ತನ್ನ ಬೆಂಬಲಿಗರಿಗೆ ಸ್ಪಷ್ಟನೆ ಕೊಟ್ಟಿದ್ದಾರೆ.
ಇಂದು ಕೋಲಾರ ಜಿಲ್ಲೆ ಶ್ರೀನಿವಾಸಪುರ ಪಟ್ಟಣದ ಚೌಡೇಶ್ವರಮ್ಮ ದೇವಸ್ಥಾನದ ಬಳಿ ರಮೇಶ್ ಕುಮಾರ್ ಭಾಷಣ.ಕಾರ್ಯಕರ್ತರ ಜೊತೆ ಕುಳಿತು ಭಾಷಣ ಮಾಡುವಾಗ ಅರಣ್ಯ ಭೂ ವಿವಾದ ಕುರಿತು ಉಲ್ಲೇಖ.ಸ್ವಾಮಿದು ಜಮೀನು,ತೋಟ ಹೋಗುತ್ತಂತೆ ಅಂತ ಎರಡು ಮೂರು ತಿಂಗಳಿಂದ ಹೇಳ್ತಿದ್ದಾರೆ, ಏನೂ ಹೋಗೋದಿಲ್ಲ. ಇದುವರೆಗೂ ನಾಲ್ಕು ಬಾರಿ ಸರ್ವೆ ಮಾಡಿದ್ದಾರೆ. ಸರ್ವೆಯಲ್ಲಿಯೂ ಸಹ ನಾನು ಅರಣ್ಯ ಅತಿಕ್ರಮ ಮಾಡಿದ್ದಾರೆ ಎಂದು ಎಲ್ಲೂ ಹೇಳಿಲ್ಲ,,
ಚೌಡೇಶ್ವರಮ್ಮ ಪಾದದ ಮೇಲೆ ಪ್ರಮಾಣ ಮಾಡಿ ಹೇಳ್ತಿನಿ ನಾನು ತಪ್ಪು ಮಾಡಿಲ್ಲ.ಒಂದೇ ಒಂದೂ ಗುಂಟೆ ಜಾಗ ಬೇಡ.ಇದನ್ನು 2002 ರಲ್ಲೇ ನಾನೆ ಸರ್ಕಾರಕ್ಕೆ ಬರೆದುಕೊಟ್ಟಿದ್ದೇನೆ.ಆದ್ರೆ ಇದೆಲ್ಲವನ್ನು ಮುಚ್ಚಿಟ್ಟಿದ್ದಾರೆ, ಈ ಬಗ್ಗೆ ನಾನು ಇದುವರೆಗೂ ಉತ್ತರ ಕೊಟ್ಟಿಲ್ಲ.
ಇದುವರೆಗೂ ನಾಲ್ಕು ಸರ್ವೇ ಆಗಿದೆ, ಎಲ್ಲದರಲ್ಲೂ ರಮೇಶ್ ಕುಮಾರ್ ನಿರ್ದೋಷಿ.ರಮೇಶ್ ಕುಮಾರ್ ಸರ್ಕಾರಿ ಹಾಗೂ ಅರಣ್ಯ ಭೂ ತೆಗೆದುಕೊಂಡಿಲ್ಲ.ಅರ್ಜಿದಾರರಿಗೆ ಆ ದೇವರು ಒಳ್ಳೇದು ಮಾಡಲಿ.ಇಷ್ಟು ದಿವಸ ಬಂದಿದ್ದು ನ್ಯೂಸ್ ರೀಲ್,ಟ್ರಯಲ್ ಅಷ್ಟೇ,ಸೋಮವಾರದಿಂದ ಆಚೆ ಸಿನಿಮಾ ಶುರುವಾಗುತ್ತೆ.
