ಜಂಟಿ ಸರ್ವೆ ಕಾರ್ಯ ಪೂರ್ಣಗೊಂಡರು ಒಮ್ಮತಕ್ಕೆ ಬಾರದ ಇಲಾಖೆಗಳ ನಡೆ….!
ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಅರಣ್ಯ ಭೂಮಿ ಒತ್ತುವರಿಯಾ,,,,,,,,?
ಶ್ರೀನಿವಾಸಪುರ/ಕೋಲಾರ : ತೀವ್ರಾ ಕೂತೂಹಲ ಕೇರಳಿಸಿದ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕು ಹೊಸಹುಡ್ಯ ಸರ್ವೇ ನಂಬರ್ 1 ಮತ್ತು 2 ಹಾಗೂ ಜಿನಕಲುಕುಂಟ ಅರಣ್ಯ ಪ್ರದೇಶದ ಅರಣ್ಯ ಭೂಮಿ ಒತ್ತುವರಿ ವಿಚಾರ, ಹೈಕೋರ್ಟ್ ಸೂಚನೆ ಮೇಲೆ ಎರಡು ದಿನಗಳ ಕಾಲ ಕಂದಾಯ ಹಾಗೂ ಅರಣ್ಯ ಇಲಾಖೆ ಜಂಟಿ ಸರ್ವೆ ಕಾರ್ಯ ಪೂರ್ಣಗೊಳಿಸಿದೆ. ಆದ್ರೆ ಎರಡು ಇಲಾಖೆಗಳ ಸರ್ವೆ ಕಾರ್ಯ ಮುಗಿದರು ಒತ್ತುವರಿ ವಿಚಾರದಲ್ಲಿ ಒಮ್ಮತಕ್ಕೆ ಬಾರದ ಸ್ಥಿತಿಯಲ್ಲಿ ಎರಡು ಇಲಾಖೆಗಳ ನಡೆಯಾಗಿದೆ.
ಹೌದು, ದಶಕಗಳಿಂದಲೂ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಹೊಸಹುಡ್ಯ ಸರ್ವೇ ನಂಬರ್ 1 ಮತ್ತು 2 ಹಾಗೂ ಜಿನಕಲುಕುಂಟ ಅರಣ್ಯ ಪ್ರದೇಶದ ಅರಣ್ಯ ಭೂಮಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಅರೋಪ ಹಿನ್ನಲೆ ಮಾನ್ಯ ಉಚ್ಚನ್ಯಾಯಾಲ ಜಂಟಿ ಸರ್ವೆ ಕಾರ್ಯಕ್ಕೆ ಸೂಚನೆ ಯನ್ನು ಕಂದಾಯ ಹಾಗೂ ಅರಣ್ಯ ಇಲಾಖೆಗಳಿಗೆ ನೀಡಿತ್ತಾದರು. ಎರಡು ಇಲಾಖೆಗಳ ಸರ್ವೆ ಪದ್ದತಿಯೂ ಹೊಂದಾಣಿಕೆಯಾಗದ ಸ್ಥಿತಿ ನಿರ್ಮಾಣವಾಗಿದೆ.
ಕಂದಾಯ ಇಲಾಖೆಯ ಪ್ರಕಾರ ಸರ್ವೆಯಲ್ಲಿ ಯಾವುದೇ ಮೇಲ್ನೋಟಕ್ಕೆ ಒತ್ತುವರಿ ಬಗ್ಗೆ ಸಂಶಯ ವ್ಯಕ್ತಪಡಿಸಿದೆ .ಇತ್ತ ಅರಣ್ಯ ಇಲಾಖೆಯ ಸರ್ವೆ ಮಾತ್ರ ಒತ್ತುವರಿಯ ಬಗ್ಗೆ ಖಚಿತ ವ್ಯಕ್ತಪಡಿಸಿದೆ. ಆದ್ರೆ ಎರಡು ದಿನಗಳ ಕಾಲ ಜಂಟಿ ಸರ್ವೆ ಮಾಡಿದ್ರು ಎರಡು ಇಲಾಖೆಗಳ ಅಭಿಪ್ರಾಯ ಒಮ್ಮತಕ್ಕೆ ಬಾರದಾಗಿದೆ.
ಸರ್ವೇ ನಂ.೧ ಮತ್ತು ೨ರಲ್ಲಿ ಅರಣ್ಯ ಭೂಮಿ ಒತ್ತುವರಿ ಆಗಿದೆ ಎಂಬ ವಾದ ಮಂಡಿಸಿದ ಅರಣ್ಯ ಇಲಾಖೆ:
ಅರಣ್ಯ ಇಲಾಖೆಯವರ ಪ್ರಕಾರ ಗುಂಟರ್ಸ್ ಚೈನ್ ಬ್ರಿಟೀಷ್ ಸರ್ಕಾರದ ಕಾಲದಿಂದ ಬಳಕೆ ಆಗುತ್ತಿದೆ. ಇದರ ಮೂಲಕ ಅಳತೆ ಮಾಡಿದರೆ ಸರಿಯಾಗಿ ಇರುತ್ತದೆ ಎಂದು ಅಧೀನಕಾರ್ಯದರ್ಶಿ ಅವರೇ ಹೇಳಿದ್ದಾರೆ. ಹಾಗಾಗಿ ಗುಂಟರ್ಸ್ ಚೈನ್ ಮೂಲಕ ಅಳತೆ ಮಾಡಿದರೆ ಇದು ಸರಿ ಇದೆ. ಹೊಸಹುಡ್ಯ ಗ್ರಾಮ ಸರ್ವೇ ನಂ.೧ ಹಾಗೂ ೨ರಲ್ಲಿ ಅರಣ್ಯ ಭೂಮಿ ಒತ್ತುವರಿಯಾಗಿದೆ.
ಅರಣ್ಯ ಭೂಮಿ ಬಿಟ್ಟು ಹೋಗಿರುವ ವಿಚಾರವೇ ಬೇರೆ. ಅರಣ್ಯ ಸೆಟ್ಲ್ಮೆಂಟ್ ಮ್ಯಾಪ್ ನಮ್ಮ ಬಳಿ ಇದೆ. ಯಾವಗ ಬೇಕಾದರೂ ನಾವು ಮ್ಯಾಪನ್ನು ಸಿದ್ಧಪಡಿಸಬಹುದು. ಒತ್ತುವರಿ ಆಗಿರುವುದು ನಿಜ. ಡಿಡಿಎಲ್ಆರ್ ಕೊಡುವ ರಿಪೋರ್ಟ್ ನೋಡಿ ತೀರ್ಮಾನ ಮಾಡುತ್ತೇವೆ.
ಸರ್ವೇ ನಂ.೧ ಹಾಗೂ ೨ರಲ್ಲಿ ನಮ್ಮ ಅರಣ್ಯ ಭೂಮಿಯ ಜಾಗ ಸೇರಿದ್ದರೆ ಮಾತ್ರ ಸಹಿ ಹಾಕುತ್ತೇನೆ. ಇಲ್ಲವಾದರೆ ನಾನು ಡಿಡಿಎಲ್ಆರ್ ವರದಿಗೆ ಸಹಿ ಹಾಕುವುದಿಲ್ಲ. ಮತ್ತೆ ಸರ್ವೇ ಆಗಲಿ ಬಿಡಿ. ಜ.೩೦ರ ಒಳಗಾಗಿ ಸರ್ವೇ ವರದಿ ಸಲ್ಲಿಸಿ ಎಂದು ಹೈಕೋರ್ಟ್ ಸೂಚನೆ ನೀಡಿದೆ ಎಂದು ಕೋಲಾರದ ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ (ಡಿ.ಸಿ.ಎಫ್).ಸರೀನ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಜಂಟಿ ಸರ್ವೆ ಪೂರ್ಣವಾದ್ರು ಕಂದಾಯ ಇಲಾಖೆಗೆ ಮೇಲ್ನೋಟಕ್ಕೆ ಒತ್ತುವರಿ ಯಾಗಿಲ್ಲ ಅನ್ಸುತ್ತೆ
ಹೈಕೋರ್ಟ್ ಸೂಚನೆ ಪ್ರಕಾರ ಜಂಟಿ ಸರ್ವೇ ಮಾಡಲಾಗಿದೆ.ಸರ್ವೇ ನಂಬರ್ 1 ಹಾಗೂ 2 ರ ಜಂಟಿ ಸರ್ವೇ ಮಾಡಲಾಗಿದೆ.ಪಿರ್ಯಾದುದಾರರಿಗೆ ನೋಟೀಸ್ ನೀಡಿ ಸರ್ವೇ ಮಾಡಲಾಗಿದೆ.ಹೊರ ಭಾಗದ ಕಂದಾಯ ಗ್ರಾಮದ ಗುರುತು ಮಾಡಲಾಗಿದೆ.ರೋವರ್ ಜೊತೆ ಚೈನ್ ಬಳಸಿ ಏಕಕಾಲದಲ್ಲಿ ಸರ್ವೇ ಮಾಡಲಾಗಿದೆ.
ಅರಣ್ಯ ಇಲಾಖೆಯ ಗಡಿ ಗುರುತಿಸುವ ಕೆಲಸ ಜಂಟಿಯಾಗಿ ಮಾಡಲಾಗಿದೆ.ನಾಲ್ಕು ತಂಡಗಳಿಂದ ಸರ್ವೇ ಮಾಡಿ,ಸರ್ವೇ ನಂಬರ್ ನ ಜಮೀನನ್ನು ಸೆರೆ ಹಿಡಿಯಲಾಗಿದೆ.ಅರಣ್ಯ ಇಲಾಖೆಯ ಗಂಟರ್ಸ್ ಚೈನ್ ಮಾಪನ 100 ಲಿಂಕ್ 66 ಅಡಿ.ಕಂದಾಯ ಇಲಾಖೆಯ ಚೈನ್ ನಲ್ಲಿ 50 ಲಿಂಕ್ಸ್ 30 ಅಡಿಯಾಗಿದೆ.ಸರ್ವೇ ನಂಬರ್ 1 ರಲ್ಲಿ 315 ಎಕರೆ ಹಾಗೂ ಸರ್ವೇ ನಂಬರ್ 2 ರಲ್ಲಿ 113 ಎಕರೆ ಗುರುತಿಸಲು ನೋಟಿಫಿಕೇಶನ್ ಇದೆ.
DDLR ನಮಗೆ ತಾಂತ್ರಿಕ ವರದಿ ನೀಡಬೇಕಿದೆ.ಪಿರ್ಯಾದುದಾರರು ಸಹ ಕೆಲವು ಮಾಹಿತಿ ಕೇಳಿದ್ದಾರೆ ಅದರ ಮಾಹಿತಿ ಪಡೆಯಬೇಕಿದೆ.ಜ.30 ರ ಒಳಗೆ ಹೈಕೋರ್ಟ್ ಗೆ ವರದಿ ಸಲ್ಲಿಸುತ್ತೇವೆ.1934 ರ ಸರ್ಕಾರಿ ನೋಟಿಫಿಕೇಶನ್ ಹಾಗೂ 1944 ರ ಗೆಜೆಟ್ ಬಿಟ್ಟು ಅರಣ್ಯ ಇಲಾಖೆಯವರು ಯಾವುದೇ ದಾಖಲೆ ಕೊಟ್ಟಿಲ್ಲ.ಮೇಲ್ನೋಟಕ್ಕೆ ನಮಗೆ ಏನೂ ಕಂಡು ಬಂದಿಲ್ಲ ಅನ್ಸುತ್ತೆ.ಇವತ್ತು ನಮ್ಮ ಸರ್ವೇ ಕಾರ್ಯ ಮುಗಿದಿದೆ.ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲೂಕಿನ ಹೊಸಹುಡ್ಯಾ ಗ್ರಾಮಾದ ಬಳಿ ಕೋಲಾರ ಜಿಲ್ಲಾಧಿಕಾರಿ ಡಾ.ರವಿ ಹೇಳಿಕೆ ನೀಡಿದ್ದಾರೆ.
ಈ ಎರಡು ಇಲಾಖೆಯ ನಡೆಯ ಬಗ್ಗೆ ಸಾರ್ವಜನಿಕವಾಗಿ ತೀವ್ರಾ ಕೂತುಹಲ ಮೂಡಿಸಿದೆ. ಎರಡು ಇಲಾಖೆಗಳ ವಿಭಿನ್ನ ಹೇಳಿಕೆ ನೋಡಿದ್ರೆ ಜಂಟಿ ಸರ್ವೆ ವರದಿ ಯಾವ ರೂಪಗೊಳ್ಳುತ್ತದೆ ಎಂಬ ಸಂಶಯ ಸಾರ್ವಜನಿಕವಾಗಿ ಮೂಡಿಸಿದೆ.
