ಕೋಲಾರ : ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅರಣ್ಯ ಒತ್ತುವರಿ ಪ್ರಕರಣ ಹಿನ್ನಲೆ ಇಂದು ಸರ್ವೆ ಕಾರ್ಯ ಆರಂಭ,
ಸ್ಥಳದಲ್ಲಿ ಮಾಜಿ ಸ್ಪೀಕರ್ ಕೆಆರ್ ರಮೇಶ್ ಕುಮಾರ್ ಸೇರಿದಂತೆ ಜಿಲ್ಲಾಧಿಕಾರಿ ಎಂ.ಆರ್.ರವಿ ಉಪಸ್ಥಿತಿ, ಕೋಲಾರ ಜಿಲ್ಲಾಧಿಕಾರಿ ಎಂಆರ್ ರವಿ ನೇತೃತ್ವದಲ್ಲಿ ನಡೆತುತ್ತಿರುವ ಸರ್ವೆ ಕಾರ್ಯ,ಸರ್ವೆ ಕೆಲಸಕ್ಕೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ ರಮೇಶ್ ಕುಮಾರ್ ಅಧಿಕಾರಿಗಳಿಗೆ ಹೇಳಿದ್ದಾರೆ.
ಹೈಕೋರ್ಟ್ ನಲ್ಲಿ 2002 ರಲ್ಲಿ ನಾನೇ ಜಂಟಿ ಸರ್ವೆ ಮಾಡಿ ಜಾಗ ಗುರುತಿಸಿ ಕೊಡುವಂತೆ ಮನವಿ ಮಾಡಿದ್ದೇನೆ, ನನಗೆ ಒಂದು ಇಂಚು ಅರಣ್ಯ ಭೂಮಿ ಬೇಡ,ನೀವು ಸರ್ವೆ ಮಾಡಿ ಜಾಗ ಗುರುತಿಸಿ ಎಂದ ರಮೇಶ್ ಕುಮಾರ್.
ಕೋಲಾರ ಜಿಲ್ಲೆ ಶ್ರೀನಿವಾಸಪುರ ತಾಲ್ಲೂಕು ಜಿನಕಲುಕುಂಟ ಅರಣ್ಯ ಪ್ರದೇಶದ,ಹೊಸಹುಡ್ಯ ಗ್ರಾಮದ ಸರ್ವೆ ನಂ 1 ಮತ್ತು 2 ರಲ್ಲಿನ 61.39 ಎಕರೆ ಅರಣ್ಯ ಭೂಮಿ ಒತ್ತುವರಿ ಆರೋಪ.ರಮೇಶ್ ಕುಮಾರ್ ವಿರುದ್ಧ ಅರಣ್ಯ ಭೂಮಿ ಒತ್ತುವರಿ ಆರೋಪ ಕುರಿತು. ಜಂಟಿ ಸರ್ವೆಗೆ ನ್ಯಾಯಾಲಯದ ಸೂಚನೆ
ಇದೇ ವೇಳೆ ಕೋಲಾರ ಜಿಲ್ಲಾಧಿಕಾರಿ ಎಂ.ಅರ್.ರವಿ ಹೇಳಿಕೆ.ಹೈ ಕೋರ್ಟ್ ಆದೇಶದಂತೆ ಜಂಟಿ ಸರ್ವೇ ಕಾರ್ಯವನ್ನ ಮಾಡಲಾಗುತ್ತಿದೆ.ಈಗಾಗಲೇ ನಾಲ್ಕು ತಂಡಗಳಾಗಿ ಸರ್ವೆ ಕಾರ್ಯ ಮಾಡಲಾಗುತ್ತಿದೆ.ಒಂದು ಸರ್ವೇ ಟೀಂ ಉತ್ತರ, ದಕ್ಷಿಣ, ಪೂರ್ವ,ಪಶ್ಚಿಮ ಗಳನ್ನ ಗುರುತಿಸಲಿದೆ.
ರೋವರ್ ಇನ್ಸ್ಟ್ರೂ ಮೆಂಟ್ ಮೂಲಕ ಗಡಿಗಳನ್ನ ಕ್ಯಾಪ್ಚರ್ ಮಾಡಲಾಗುತ್ತದೆ.ನಾಲ್ಕು ಗಡಿಗಳಲ್ಲಿ ರೋವರ್ ಮೂಲಕ ಕ್ಯಾಪ್ಚರ್ ಮಾಡಿ ಸರ್ವೆ ರೀಡಿಂಗ್ ಮಾಡಲಾಗುತ್ತದೆ.ಮೊದಲಿಗೆ ಗ್ರಾಮದ ಗಡಿ ನಂತರ ಅರಣ್ಯ ಭೂಮಿ ಸರ್ವೇ.ಅದಾದ ಬಳಿಕ ಅರಣ್ಯ ಗಡಿಯನ್ನ ಗುರುತಿಸಲಾಗುವುದು.ಇದು ಸಂಪೂರ್ಣ ತಾಂತ್ರಿಕತೆಯಿಂದ ಕೂಡಿದೆ.ಲ್ಯಾಂಡ್ ಪಾರ್ಸಲ್ ಸರ್ವೇ ಮಾಡಲಾಗುವುದು.
ಮೊದಲು ಕಂದಾಯ ಬಳಿಕ ಅರಣ್ಯ ಅಧಿಕಾರಿಗಳ ಸರ್ವೇ.ರೀಡಿಂಗ್ ನಂತರ ಆಮೇಲೆ ಯಾವ ರೀತಿ ಮಾಡಬೇಕು ಅನ್ನೋದು ತಿಳಿಯಲಿದೆ.ಜಂಟಿ ಸರ್ವೇ ಮುಖ್ಯ ಉದ್ದೇಶ ಹೊಸಹುಡ್ಯ ವಸ್ತು ಸ್ಥಿತಿ ಅರಿಯುವುದಷ್ಟೆ.ಒತ್ತುವರಿಯಾಗಿದ್ಯಾ ಅನ್ನೋ ಪ್ರಶ್ನೆಗೆ ಡಿಸಿ ಪ್ರತಿಕೃಯೆ.ಒತ್ತುವರಿ ಪ್ರಶ್ನೆಯೆ ಇಲ್ಲ, ಮೊದಲಿಗೆ ಸರ್ವೆ ನಂತರ ಒತ್ತುವರಿಯಾಗಿದ್ಯಾ ಅನ್ನೋದು ತಿಳಿಯಲಿದೆ.ಗಡಿ ಗುರಿತಿಸಿದ ಬಳಿಕ ಒತ್ತುವರಿ ಯಾಗಿದ್ಯಾ ಅನ್ನೋದು ತಿಳಿಯಲಿದೆ.ಹೊಸಹುಡ್ಯ ಬಳಿ ಜಿಲ್ಲಾಧಿಕಾರಿ ಎಂ.ಅರ್.ರವಿ ಹೇಳಿಕೆ
