Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ
    • ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು
    • ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ
    • ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ
    • ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಬೃಹತ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ
    • ಪೂರ್ವಜರು ನಿಮಗೆ ಯಾವ ಚಿಹ್ನೆಗಳು ಆಶೀರ್ವದಿಸಿದ್ದಾರೆಂದು ನಿಮಗೆ ತಿಳಿದಿದೆಯೇ – ಗರುಡ ಪುರಾಣ ಏನು ಹೇಳುತ್ತದೆ?
    • ತೀವ್ರವಾಗಿ ಉಲ್ಬಣಗೊಂಡಿರುವ ಮಧ್ಯಪ್ರಾಚ್ಯ ಯುದ್ಧವು ಈಗ ಮೂರನೇ ವಾರಕ್ಕೆ ಪ್ರವೇಶಿಸಿದೆ
    • ಉದ್ವಿಗ್ನತೆಯ ನಡುವೆಯೇ ಇರಾನ್ ಡಿಯಾಗೋ ಗಾರ್ಸಿಯಾ ಸೇನಾ ನೆಲೆಯ ಮೇಲೆ ಕ್ಷಿಪಣಿಗಳನ್ನು ಹಾರಿಸಿದೆ
    Facebook X (Twitter) Instagram
    KARNIK EXPRESSKARNIK EXPRESS
    Tuesday, April 7
    • Home

      ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ

      April 4, 2026

      ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

      April 2, 2026

      ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

      March 31, 2026

      ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ

      March 29, 2026

      ಪ್ರವಾಸಿ ಬಸ್ ನಿಯಂತ್ರಣ ತಪ್ಪಿ ಬೃಹತ್ ಬಂಡೆಗೆ ಡಿಕ್ಕಿ ಹೊಡೆದ ಪರಿಣಾಮ 5 ಜನರು ಸಾವನ್ನಪ್ಪಿದ್ದಾರೆ

      March 29, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ತಾಜಾ ಸುದ್ದಿ»ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

    ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

    • karnik express
    • March 31, 2026
    • 10:28 am

    FEATURED IN

    image_processing20230220-6331-pnenon
    whatsapp-logo-icon-free-png
    images

    ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

    ಶ್ರೀನಿವಾಸಪುರ: ಕೋಲಾರ ಜಿಲ್ಲೆಯ ಮಾವು ಬೆಳೆಗಾರರು ಈ ಬಾರಿ ಹಿಂದೆಂದೂ ಕಾಣದಂತಹ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ರಾಜ್ಯ ಸರ್ಕಾರ ತಕ್ಷಣವೇ ಮಧ್ಯಪ್ರವೇಶಿಸಿ ಪ್ರತಿ ಎಕರೆಗೆ ಕನಿಷ್ಠ 40,000 ರೂಪಾಯಿಗಳ ಬೆಳೆ ನಷ್ಟ ಪರಿಹಾರ ಘೋಷಿಸಬೇಕೆಂದು ಕರ್ನಾಟಕ ಪ್ರಾಂತ ರೈತ ಸಂಘ (KPRS) ಆಗ್ರಹಿಸಿದೆ. ಸೋಮವಾರ ಶ್ರೀನಿವಾಸಪುರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ರಾಜ್ಯ ಮಾವು ಬೆಳೆಗಾರರ ಸಂಘದ ರಾಜ್ಯ ಸಂಚಾಲಕರಾದ ಪಿ ಆರ್ ಸೂರ್ಯನಾರಾಯಣ ಜಿಲ್ಲೆಯ ಮಾವು ಬೆಳೆಗಾರರ ದಯನೀಯ ಸ್ಥಿತಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟರು.
    ಜಿಲ್ಲೆಯ ಮಾವಿನ ಇತಿಹಾಸದಲ್ಲೇ ಮೊದಲ ಬಾರಿಗೆ ಶೇ. 100 ರಷ್ಟು ಹೂವು ಬಂದಿದ್ದರೂ, ಕೇವಲ ಶೇ. 10 ರಿಂದ 15 ರಷ್ಟು ಮಾತ್ರ ಕಾಯಿ ಕಾಣಿಸಿಕೊಂಡಿದೆ. ಅತಿಯಾದ ತಾಪಮಾನ ಹಾಗೂ ಕೀಟಬಾಧೆಯಿಂದಾಗಿ ಶೇ. 70 ರಿಂದ 80 ರಷ್ಟು ಫಸಲು ನಾಶವಾಗುವ ಭೀತಿ ಎದುರಾಗಿದೆ.
    ಪ್ರತಿ ಎಕರೆಗೆ ಉಳುಮೆ, ಗೊಬ್ಬರ, ಔಷಧ ಸಿಂಪರಣೆ ಹಾಗೂ ಕಾವಲು ಸೇರಿದಂತೆ ಕನಿಷ್ಠ 20 ರಿಂದ 25 ಸಾವಿರ ರೂಪಾಯಿಗಳ ಖರ್ಚು ತಗಲುತ್ತಿದೆ. ಆದರೆ ಫಸಲು ಇಲ್ಲದ ಕಾರಣ ಬೆಳೆಗಾರರು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ.
    ಫಸಲ್ ಬಿಮಾ ಯೋಜನೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ, ಬೆಳೆ ವಿಮೆ ಮಾಡಿಸಿರುವ ರೈತರಿಗೆ ವಿಮಾ ಕಂಪನಿಗಳಿಂದ ಶೀಘ್ರವಾಗಿ ಪರಿಹಾರ ಕೊಡಿಸಲು ಜಿಲ್ಲಾಡಳಿತ ಮುಂದಾಗಬೇಕು. ಮುಂಗಾರು ಮತ್ತು ಹಿಂಗಾರು ಮಳೆ ವೈಫಲ್ಯದಿಂದ ಅಂತರ್ಜಲ ಕುಸಿದಿದ್ದು, ಮಾವಿನ ಮರಗಳು ತೇವಾಂಶದ ಕೊರತೆಯಿಂದ ಚಿಗುರೊಡೆಯದೆ ಹಳದಿ ಬಣ್ಣಕ್ಕೆ ತಿರುಗುತ್ತಿವೆ.
    “ರಾಜ್ಯದಲ್ಲೇ ಮಾವು ಬೆಳೆಯುವಲ್ಲಿ ಕೋಲಾರ ಜಿಲ್ಲೆ ಮೊದಲ ಸ್ಥಾನದಲ್ಲಿದೆ. ಆದರೆ ಸತತ ಬೆಲೆ ಕುಸಿತ ಮತ್ತು ಈ ವರ್ಷದ ಪ್ರಕೃತಿ ವಿಕೋಪದಿಂದಾಗಿ ರೈತರು ಬೀದಿಗೆ ಬೀಳುವಂತಾಗಿದೆ. ಸರ್ಕಾರ ವಿಶೇಷ ಪ್ಯಾಕೇಜ್ ಘೋಷಿಸದಿದ್ದರೆ ರೈತರ ಬದುಕು ದುಸ್ತರವಾಗಲಿದೆ,” ಎಂದು ಕೆಪಿಆರ್‌ಎಸ್ ರಾಜ್ಯ ಉಪಾಧ್ಯಕ್ಷರಾದ ಪೀಲೆರ್ ಸೂರ್ಯನಾರಾಯಣ ಆತಂಕ ವ್ಯಕ್ತಪಡಿಸಿದರು.
    ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಾಪಕೋಟಿ ನವೀನ್ ಕುಮಾರ್, ತಾಲೂಕು ಕಾರ್ಯದರ್ಶಿ ಸೈಯದ್ ಫಾರೂಖ್, ಮತ್ತು ತಾಲೂಕು ಅಧ್ಯಕ್ಷ ಸೋಮಶೇಖರ್ ಗೌಡ ಉಪಸ್ಥಿತರಿದ್ದರು.

    PrevMarch 31, 2026ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ
    March 31, 2026ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವುNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ದ್ವಿಚಕ್ರ ವಾಹನವು ರಸ್ತೆ ಬದಿಯ ಡಿವೈಡರ್‌ಗೆ ಡಿಕ್ಕಿ ಸವಾರ ಸಾವು ಮತ್ತೊರ್ವನಿಗೆ ಗಾಯ

    April 4, 2026

    ಎರಡು ಪ್ರತ್ಯೇಕ ಅಪಘಾತ : ಇಬ್ಬರು ಸಾವು

    April 2, 2026

    ಮಾವು ಬೆಳೆಗಾರರ ಸಂಕಷ್ಟ – ಎಕರೆಗೆ 40,000 ರೂ. ಪರಿಹಾರಕ್ಕೆ ಕೆಪಿಆರ್‌ಎಸ್ ಒತ್ತಾಯ

    March 31, 2026

    ನಿಲ್ಲಿಸಿದ್ದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಕ್ಯಾಬ್ ಚಾಲಕ ಜೀವಂತ ದಹನ

    March 29, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.