Close Menu
KARNIK EXPRESSKARNIK EXPRESS
    Facebook X (Twitter) Instagram
    Trending
    • ಮಧ್ಯಪ್ರಾಚ್ಯ ಸಂಘರ್ಷ  ನಡುವೆಯೇ ಇರಾನ್ ಗಲ್ಫ್ ನೆರೆಹೊರೆಯವರ ಮೇಲೆ ದಾಳಿ ನಡೆಸಿದೆ
    •  10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ  ಆರೋಪಿ ಬಂಧನ
    • ಭಾರತದ ಧ್ವಜ ಹೊತ್ತ 4ನೇ ಟ್ಯಾಂಕರ್, ಜಗ್ ಲಾಡ್ಕಿ, ಯುಎಇಯ ಫುಜೈರಾ ಬಂದರಿನಿಂದ ಸುರಕ್ಷಿತವಾಗಿ ಪಾರಾಗಿದೆ
    • ಚೆನ್ನೈನ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟ; ಇಬ್ಬರು ಮಕ್ಕಳು ಸಾವು, ನಾಲ್ವರಿಗೆ ಗಾಯ 
    • ಬೈಕ್‌ನ ಹೊಗೆಯನ್ನು ಉಸಿರಾಡಿದ ಕುಟುಂಬದ ನಾಲ್ವರು ಸದಸ್ಯರು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.
    • ಕಾರು-ದ್ವಿಚಕ್ರ ವಾಹನ ಡಿಕ್ಕಿಯಲ್ಲಿ ಇಬ್ಬರಿಗೆ ಗಾಯ
    • ನಾಸಾ ಇಂದು ರಾತ್ರಿ ಪ್ರಮುಖ ಚಂದ್ರನ ಮಿಷನ್ ಆರ್ಟೆಮಿಸ್ II ಉಡಾವಣಾ ವೇಳಾಪಟ್ಟಿ ಅನಾವರಣಗೊಳಿಸಿದೆ
    •  ಮಹಾ ಕುಂಭಮೇಳದ ಮೊನಾಲಿಸಾ ಭೋಂಸ್ಲೆ,ಸಂಗಾತಿ ಫರ್ಮಾನ್ ಖಾನ್  ಜೊತೆ ಕೇರಳದ ದೇವಾಲಯದಲ್ಲಿ ವಿವಾಹವಾದರು.
    Facebook X (Twitter) Instagram
    KARNIK EXPRESSKARNIK EXPRESS
    Wednesday, March 18
    • Home

      ಮಧ್ಯಪ್ರಾಚ್ಯ ಸಂಘರ್ಷ  ನಡುವೆಯೇ ಇರಾನ್ ಗಲ್ಫ್ ನೆರೆಹೊರೆಯವರ ಮೇಲೆ ದಾಳಿ ನಡೆಸಿದೆ

      March 17, 2026

       10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ  ಆರೋಪಿ ಬಂಧನ

      March 17, 2026

      ಭಾರತದ ಧ್ವಜ ಹೊತ್ತ 4ನೇ ಟ್ಯಾಂಕರ್, ಜಗ್ ಲಾಡ್ಕಿ, ಯುಎಇಯ ಫುಜೈರಾ ಬಂದರಿನಿಂದ ಸುರಕ್ಷಿತವಾಗಿ ಪಾರಾಗಿದೆ

      March 15, 2026

      ಚೆನ್ನೈನ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟ; ಇಬ್ಬರು ಮಕ್ಕಳು ಸಾವು, ನಾಲ್ವರಿಗೆ ಗಾಯ 

      March 15, 2026

      ಬೈಕ್‌ನ ಹೊಗೆಯನ್ನು ಉಸಿರಾಡಿದ ಕುಟುಂಬದ ನಾಲ್ವರು ಸದಸ್ಯರು ನಿದ್ರೆಯಲ್ಲಿಯೇ ಸಾವನ್ನಪ್ಪಿದ್ದಾರೆ.

      March 15, 2026
    • ವಿದೇಶ
    • ದೇಶ
    • ರಾಜ್ಯ
    • ಜಿಲ್ಲೆ
    • ರಾಜಕೀಯ
    • ಕ್ರೈಂ
    • ಆರೋಗ್ಯ
    • ಉದ್ಯೋಗ
    • ಕ್ರೀಡೆ
    • ಜ್ಯೋತಿಷ್ಯ
    • ಪರಿಸರ
    • ವಾಣಿಜ್ಯ
    • ವಿಜ್ಞಾನ
    • ಸಾಮಾಜಿಕ
    • ಇ ಪೇಪರ್
    KARNIK EXPRESSKARNIK EXPRESS
    Home»ಜಿಲ್ಲೆ» 10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ  ಆರೋಪಿ ಬಂಧನ

     10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ  ಆರೋಪಿ ಬಂಧನ

    • karnik express
    • March 17, 2026
    • 9:23 am

    FEATURED IN

    image_processing20230220-6331-pnenon
    whatsapp-logo-icon-free-png
    images

     10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ  ಆರೋಪಿ ಬಂಧನ

    ವೃದ್ಧನೋರ್ವ 10 ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಚಾಮರಾಜನಗರದಲ್ಲಿ ಕೇಳಿಬಂದಿದೆ.

    ಚಾಮರಾಜನಗರ : 10 ವರ್ಷ ವಯಸ್ಸಿನ ಬಾಲಕಿ ಮೇಲೆ ವೃದ್ಧನೋರ್ವ ಲೈಂಗಿಕ ದೌರ್ಜನ್ಯ ಎಸಗಿರುವ ಘಟನೆ ಗುಂಡ್ಲುಪೇಟೆ ತಾಲೂಕಿನ‌ ಗ್ರಾಮವೊಂದರಲ್ಲಿ ನಡೆದಿದೆ.

    ಗ್ರಾಮದ ಮಹದೇವಪ್ಪ(65) ಎಂಬಾತ ಬಂಧಿತ ಆರೋಪಿ. ಸಂತ್ರಸ್ತ ಬಾಲಕಿಗೆ ಆರೋಪಿ ಕೆನ್ನೆ ಸವರುವುದು, ಮುತ್ತು ಕೊಡುವುದು ಮಾಡುತ್ತಿದ್ದನಂತೆ. ತಾತನ ಸಮಾನವೆಂದು ಸಾಮಾನ್ಯವಾಗಿಯೇ ಪಾಲಕರು ಭಾವಿಸಿದ್ದರು.‌ ಆದರೆ, ಭಾನುವಾರ ಮಧ್ಯಾಹ್ನ ಬಾಲಕಿಯು ಮನೆಗೆ ತೆರಳುತ್ತಿದ್ದಾಗ ವೃದ್ಧನು ಬಾಲಕಿಯ ಪಾಲಕರು ಮನೆಯಲ್ಲಿ ಇಲ್ಲದ್ದನ್ನು ಗಮನಿಸಿ ಲೈಂಗಿಕ ದೌರ್ಜನ್ಯವೆಸಗಿ, ದೇಹದ ಹಲವೆಡೆ ಪರಚಿ ಗಾಯಗೊಳಿಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ಬಾಲಕಿ ಸಪ್ಪೆ ಮೋರೆ ಹಾಕಿಕೊಂಡಿದ್ದನ್ನು ಗಮನಿಸಿದ ಪಾಲಕರು ವಿಚಾರಿಸಿದಾಗ ವೃದ್ಧನ ಪೈಶಾಚಿಕ ಕೃತ್ಯ ಬೆಳಕಿಗೆ ಬಂದಿದೆ. ಸದ್ಯ ಬೇಗೂರು ಠಾಣೆ ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಈ ಸಂಬಂಧ ಬೇಗೂರು ಠಾಣೆಯಲ್ಲಿ ಪೋಕ್ಸೋ ಕೇಸ್ ದಾಖಲಾಗಿದೆ.

    ಅತ್ಯಾಚಾರಕ್ಕೆ ಯತ್ನ– 5 ವರ್ಷ ಕಠಿಣ ಶಿಕ್ಷೆ : ಜಮೀನಿನಲ್ಲಿ ಕೃಷಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದವನಿಗೆ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 5 ವರ್ಷ ಕಠಿಣ ಶಿಕ್ಷೆ ವಿಧಿಸಿ ಆದೇಶಿಸಿದೆ.

    ಚಾಮರಾಜನಗರ ತಾಲೂಕಿನ ಮೇಗಲಹುಂಡಿ ಗ್ರಾಮದ ರಂಗಸ್ವಾಮಿ(26) ಶಿಕ್ಷೆಗೊಳಗಾದ ಅಪರಾಧಿ. 2020ರ ಅ.1ರಂದು ತಾಲೂಕಿನ ಗ್ರಾಮವೊಂದರ ಜಮೀನಿನಲ್ಲಿ ಮಹಿಳೆ ಕೆಲಸ ಮಾಡುತ್ತಿದ್ದಳು. ಇಲ್ಲಿಗೆ ಬಂದ ರಂಗಸ್ವಾಮಿ ಮಹಿಳೆಯನ್ನು ಸೊಪ್ಪು ಖರೀದಿಸುವ ನೆಪದಲ್ಲಿ ಮಾತನಾಡಿಸಿದ್ದ. ಈಕೆಯಿಂದ ಸೊಪ್ಪು ತೆಗೆದುಕೊಂಡ ಬಳಿಕ ಹಿಂಬಾಲಿಸಿಕೊಂಡು ಹೋಗಿ ಗಾಯಗೊಳಿಸಿ, ಅತ್ಯಾಚಾರ ಮಾಡಲು ಯತ್ನಿಸಿದ್ದ. ಈ ವೇಳೆ ಮಹಿಳೆ ಜೋರಾಗಿ ಕೂಗಿಕೊಂಡ ಶಬ್ಧ ಕೇಳಿ ಅಕ್ಕಪಕ್ಕದ ಜಮೀನಿನವರು ಅಲ್ಲಿಗೆ ಬಂದಿದ್ದಾರೆ. ಆಗ ಅವರನ್ನು ಕಂಡೊಡನೆ ಮಹಿಳೆಯಿಂದ ಸರ ಕಿತ್ತುಕೊಂಡು ಬೈಕ್ ಬಿಟ್ಟು ರಂಗಸ್ವಾಮಿ ಸ್ಥಳದಿಂದ ಪರಾರಿಯಾಗಿದ್ದ.

    ಈ ಸಂಬಂಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಎಸ್. ಜೆ. ಕೃಷ್ಣ ಅವರು, ರಂಗಸ್ವಾಮಿಗೆ 5 ವರ್ಷ ಕಠಿಣ ಶಿಕ್ಷೆ ಮತ್ತು ನೊಂದ ಮಹಿಳೆಗೆ 16 ಸಾವಿರ ರೂ. ಪರಿಹಾರ ನೀಡುವಂತೆ ಆದೇಶ ನೀಡಿದ್ದಾರೆ. ನೊಂದ ಮಹಿಳೆಯ ಪರವಾಗಿ ಸರ್ಕಾರಿ ಅಭಿಯೋಜಕ ಕೆ. ಯೋಗೇಶ್ ವಾದ ಮಂಡಿಸಿದ್ದರು.

    ಅಪ್ರಾಪ್ತೆಗೆ ಲೈಂಗಿಕ ದೌರ್ಜನ್ಯ (ಶಿವಮೊಗ್ಗ) : ಮದುವೆಯಾಗುವುದಾಗಿ ನಂಬಿಸಿ 16 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಯುವಕನಿಗೆ(23) ಶಿವಮೊಗ್ಗದ ನ್ಯಾಯಾಲಯ 20 ವರ್ಷ ಕಠಿಣ ಕಾರಾಗೃಹ ಶಿಕ್ಷೆ ಹಾಗೂ 1 ಲಕ್ಷ ರೂ. ದಂಡ ವಿಧಿಸಿ ಇತ್ತೀಚಿಗೆ ಆದೇಶ ಹೊರಡಿಸಿತ್ತು.

    PrevMarch 17, 2026ಭಾರತದ ಧ್ವಜ ಹೊತ್ತ 4ನೇ ಟ್ಯಾಂಕರ್, ಜಗ್ ಲಾಡ್ಕಿ, ಯುಎಇಯ ಫುಜೈರಾ ಬಂದರಿನಿಂದ ಸುರಕ್ಷಿತವಾಗಿ ಪಾರಾಗಿದೆ
    March 17, 2026ಮಧ್ಯಪ್ರಾಚ್ಯ ಸಂಘರ್ಷ  ನಡುವೆಯೇ ಇರಾನ್ ಗಲ್ಫ್ ನೆರೆಹೊರೆಯವರ ಮೇಲೆ ದಾಳಿ ನಡೆಸಿದೆNext
    Picture of karnik express

    karnik express

    [ays_block_subscribe id='1'] Content [/ays_block_subscribe]

    Subscribe to Updates

    Get the latest creative news from FooBar about art, design and business.

    An error occurred.

    ಮಧ್ಯಪ್ರಾಚ್ಯ ಸಂಘರ್ಷ  ನಡುವೆಯೇ ಇರಾನ್ ಗಲ್ಫ್ ನೆರೆಹೊರೆಯವರ ಮೇಲೆ ದಾಳಿ ನಡೆಸಿದೆ

    March 17, 2026

     10ರ ಬಾಲಕಿ ಮೇಲೆ ವೃದ್ಧನಿಂದ ಲೈಂಗಿಕ ದೌರ್ಜನ್ಯ  ಆರೋಪಿ ಬಂಧನ

    March 17, 2026

    ಭಾರತದ ಧ್ವಜ ಹೊತ್ತ 4ನೇ ಟ್ಯಾಂಕರ್, ಜಗ್ ಲಾಡ್ಕಿ, ಯುಎಇಯ ಫುಜೈರಾ ಬಂದರಿನಿಂದ ಸುರಕ್ಷಿತವಾಗಿ ಪಾರಾಗಿದೆ

    March 15, 2026

    ಚೆನ್ನೈನ ಮನೆಯಲ್ಲಿ ಎಲ್‌ಪಿಜಿ ಸಿಲಿಂಡರ್ ಸ್ಫೋಟ; ಇಬ್ಬರು ಮಕ್ಕಳು ಸಾವು, ನಾಲ್ವರಿಗೆ ಗಾಯ 

    March 15, 2026
    © 2026 KARNIK EXPRESS . Designed by WEBGAUGE.
    • About Us
    • Privacy Policy
    • DISCLAIMER
    • Terms and Conditions
    • Contact us

    Type above and press Enter to search. Press Esc to cancel.

    Ad Blocker Enabled!
    Ad Blocker Enabled!
    Our website is made possible by displaying online advertisements to our visitors. Please support us by disabling your Ad Blocker.