ಕೋಲಾರ: ಸಂವಿಧಾನ ಶಿಲ್ಪಿ ಅಂಬೇಡ್ಕರ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಸಂಪುಟದಿಂದ ಉಚ್ಚಾಟಿಸಬೇಕು, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಅವರನ್ನು ನಿಂದಿಸಿರುವ ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಅವರನ್ನು ಪರಿಷತ್ ಸ್ಥಾನದಿಂದ ವಜಾ ಗೊಳಿಸಬೇಕೆಂದು ಆಗ್ರಹಿಸಿ ನಾಳೆ ಜನವರಿ 3 ರಂದು ಕೋಲಾರ ಬಂದ್ ಗೆ ಜಿಲ್ಲೆಯ ಪ್ರಗತಿಪರ ಸಂಘಟನೆಗಳು ಕರೆ ಕೊಟ್ಟಿದ್ದಾರೆ.
ಸಂದರ್ಭದಲ್ಲಿ ಮಾತನಾಡಿದ ನಗರ ಸಭೆ ಸದಸ್ಯ ಅಂಬರೀಶ್ ಬಿಜೆಪಿಯವರಿಗೆ ಅಧಿಕಾರಕ್ಕೇರಲು ಮಾತ್ರ ಸಂವಿಧಾನ ಬೇಕು ಆದರೆ ಅವರ ಆಶಯಗಳನ್ನು ವಿರೋಧಿಸಿಕೊಂಡು ಬಂದಿದ್ದಾರೆ ಬಿಜೆಪಿ ಪಕ್ಷದ ನಾಯಕರಲ್ಲಿ ಅಂಬೇಡ್ಕರ್ ಬಗ್ಗೆ ಮೊದಲಿಂದಲೂ ತಿರಸ್ಕಾರದ ಭಾವನೆ ಇದೆ ಎಂದೂ ಆರೋಪಿಸಿದರು.
ಕಳೆದ ಹತ್ತು ವರ್ಷಗಳಿಂದ ಕೇಂದ್ರದಲ್ಲಿ ಅಧಿಕಾರ ನಡೆಸಿಕೊಂಡು ಬಂದಿರುವ ಬಿಜೆಪಿ ಪಕ್ಷವು ನಿರಂತರವಾಗಿ ಸ್ವಾತಂತ್ರ್ಯ ಹೋರಾಟಗಾರರನ್ನು ಸೇರಿದಂತೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರ ವಿರುದ್ದ ಇಲ್ಲಸಲ್ಲದ ಆರೋಪಗಳನ್ನು ಮಾಡಿದ್ದಾರೆ ಅಂಬೇಡ್ಕರ್ ಅಂತಹ ಮಹಾನ್ ಚೇತನ ದೇಶಕ್ಕೆ ಸಂವಿಧಾನ ಕೊಟ್ಟು ಅದರಿಂದಲೇ ಮತದಾನದಿಂದ ಅಧಿಕಾರವನ್ನು ಕೊಟ್ಟಿದ್ದಾರೆ ಎಂಬುದನ್ನು ಮರೆತಿದ್ದಾರೆ ಅಂಬೇಡ್ಕರ್ ಒಬ್ಬ ವ್ಯಕ್ತಿಯಲ್ಲ ಅವರೊಬ್ಬರು ದೇಶದ ಶಕ್ತಿಯಾಗಿದ್ದು ಜನ ಕಾಯತ್ತಾರೆ ಇದ್ದಾರೆ,ನಮ್ಮ ನಾಯಕನ ಬಗ್ಗೆ ಹಗುರವಾಗಿ ಮಾತನಾಡುವುದು ಸಲ್ಲದ್ದು .ಆದರಿಂದ ನಾಳೆ ಕೋಲಾರ ಬಂದ್ ಗೆ ಕರೆ ನೀಡಲಾಗಿದೆ .
ನಾಳೆ ಯ ಬಂದ್ ಕೋಲಾರದಲ್ಲಿ ಪ್ರಗತಿಪರ ಸಂಘಟನೆಗಳು ,ಹೋರಾಟಗಾರರು, ಬೈಕ್ ರ್ಯಾಲಿ ನಡೆಸಿ ನಾಳೆಯ ಬಂದ್ಗೆ ಸಮಸ್ತ ನಾಗರೀಕರು ಬೆಂಬಲಿಸುವಂತೆ ಕೊರಿದ್ದಾರೆ. ನಾಳೆಯ ಬಂದ್ ವೇಳೆ ಕೋಲಾರ ದಲ್ಲಿ ಯಾವುದೇ ಶಾಲಾ ಕಾಲೇಜು ಇರುವುದಿಲ್ಲ, ಅಂಗಡಿ ಹೊಟೇಲ್ ಮುಚ್ಚಿರುತ್ತವೆ. ಸಾರಿಗೆ ಖಾಸಗಿ ,ಬಸ್ ಸಂಚಾರವು ಸಹ ಬಂದ್ ಆಗಲಿದೆ. ಎಂದು ಹೋರಾಟಗಾರರು ತಿಳಿಸಿದ್ದಾರೆ.
