ಬೈಕ್ ಹಾಗೂ ಶಾಲಾ ವಾಹನ ನಡುವೇ ಭೀಕರ ರಸ್ತೆ ಅಪಘಾತ, ಸ್ಥಳದಲ್ಲೇ ಬೈಕ್ ನಲ್ಲಿದ್ದ ನಾಲ್ಕು ಜನ ಸಾವು, ಬುರುಡಗುಂಟೆ ಬಳಿ ಘಟನೆ.
ಚಿಂತಾಮಣಿ :ಶಾಲಾ ವಾಹನ ಹಾಗೂ ಪಲ್ಸರ್ ದ್ವಿಚಕ್ರ ವಾಹನದ ನಡುವೆ ಭೀಕರ ಅಪಘಾತ ಸ್ಥಳದಲ್ಲೇ ದ್ವಿಚಕ್ರ ವಾಹನದಲ್ಲಿದ್ದ ನಾಲ್ಕು ಜನ ಸಾವು ಒಬ್ಬರಿಗೆ ಗಂಬೀರ ಗಾಯವಾಗಿ ಆಸ್ಪತ್ರೆ ಸೇರಿರುವ ಘಟನೆ, ಗುರುವಾರ ಸಂಜೆ ೬-೩೦ ರ ಸಮಯದಲ್ಲಿ ಚಿಂತಾಮಣಿ ತಾಲೂಕು ಬುರುಡಗುಂಟೆ ಬಳಿ ನಡೆದಿದೆ.

ಅಪಘಾತದಲ್ಲಿ ಮೃತಪಟ್ಟವರನ್ನ ಚೇಳೂರು ತಾಲೂಕು ಚಿಲಕಲನೇರ್ಪು ಗ್ರಾಮದ ಬಾಲಾಜಿ , ವೆಂಕಟೇಶಪ್ಪ ಹಾಗೂ ಮಕ್ಕಳಾದ ಹರೀಶ್ ಮತ್ತು ಆಚಿತ ರವರು
ಗುರುವಾರ ಸಂಜೆ ೬-೩೦ ರ ಸಮಯದಲ್ಲಿ ಮೃತರು ತಮ್ಮ ಸ್ವಗ್ರಾಮ ಚಿಲಕಲನೇರ್ಪು ಗ್ರಾಮದಿಂದ ಶಿಡ್ಲಘಟ್ಟ ತಾಲೂಕು ತಲಕಾಯಲಬೆಟ್ಟದಲ್ಲಿ ನಡೆಯುತ್ತಿದ್ದು ಸಂಬಂದಿಕರ ಮದುವೆ ಕಾರ್ಯಕ್ಕೆ ದ್ವಿಚಕ್ರ ವಾಹನದಲ್ಲಿ ಬುರುಡಗುಂಟೆ ಮಾರ್ಗವಾಗಿ ತೇರಳುತ್ತಿದ್ದ ವೇಳೆ ಬಿರುಡಗುಂಟೆ ಬಳಿ ಎದುರುಗಡೆಯಿಂದ ಬಂದ ಶಾಲಾ ವಾಹನ ಹಾಗೂ ದ್ವಿಚಕ್ರ ವಾಹನದ ನಡುವೆ ಮುಖಾ ಮುಖಿ ಡಿಕ್ಕಿಯಾಗಿ ದ್ವಿಚಕ್ರ ವಾಹನದಲ್ಲಿದ್ದ ಚೇಳೂರು ತಾಲೂಕು ಚಿಲಕಲನೇರ್ಪು ಗ್ರಾಮದ ಬಾಲಾಜಿ , ವೆಂಕಟೇಶಪ್ಪ ಹಾಗೂ ಮಕ್ಕಳಾದ ಹರೀಶ್,ಆಚಿತ ರವರು ಸ್ಥಳದಲ್ಲೇ ಸಾವನ್ನಪ್ಪಿದರೆ, ದ್ವಿಚಕ್ರ ವಾಹನದಲ್ಲಿದ್ದ ಮತ್ತೊಬ್ಬ ಹೆಣ್ಣು ಮಗಳಿಗೆ ಗಂಭೀರ ಸ್ವರೂಪದ ಗಾಯಗಳಾಗಿ ಆಸ್ಪತ್ರೆ ಸೇರಿದ್ದಾರೆ.
ಇನ್ನೂ ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಕೆಂಚಾರ್ಲಹಳ್ಳಿ ಪೊಲೀಸರು ಬೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
