ಕೋಲಾರ ಜಿಲ್ಲೆಯಲ್ಲಿ ಧಾರಕಾರ ಮಳೆ : ಮನೆಗಳಿಗೆ ಮಳೆ ನೀರು ನುಗ್ಗಿ ಜನರ ಬದುಕು ಹಸ್ತವ್ಯಸ್ತ
ಶ್ರೀನಿವಾಸಪುರ ಸುದ್ದಿ: ರಾತ್ರಿ ಸುರಿದಂತಹ ಭಾರಿ ಮಳೆಗೆ ಕೋಲಾರ ಜಿಲ್ಲೆಯ ಶ್ರೀನಿವಾಸಪುರ ಪಟ್ಟಣದ ಸಂತೆ ಮೈದಾನದ ಮನೆಗಳಿಗೆ ಮಳೆ ನೀರು ನುಗ್ಗಿ ಜನರ ಬದುಕು ಹಸ್ತವ್ಯಸ್ತವಾಗಿದ್ದು ಜನ ಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಸ್ಥಳೀಯ ನಿವಾಸಿ ಅಜಯ್ ಮಾಧ್ಯಮಗಳೊಂದಿಗೆ ಮಾತನಾಡಿ ರಾತ್ರಿ ಸುಡುವಂತಹ ಬಾರಿ ಮಳೆಗೆ ಮನೆಗಳಿಗೆ ಮಳೆ ನೀರು ಹಾಗೂ ಚರಂಡಿ ನೀರು ಮುಗಿದು ಜನ ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಬಹಳಷ್ಟು ಮನೆಗಳಲ್ಲಿ ರಾತ್ರಿ ಇಡೀ ಜಾಗರಣೆ ಮಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಸಮಸ್ಯೆ ಕುರಿತು ಪುರಸಭೆ ಸಿಬ್ಬಂದಿಗಿ ಹಾಗೂ ಪುರಸಭೆ ಸದಸ್ಯರಿಗೆ ಫೋನ್ ಕರೆ ಮಾಡಿದರು ಸಹ ಯಾರು ಸ್ಪಂದನೆ ನೀಡಲಿಲ್ಲ ಪ್ರತಿ ಬಾರಿಯೂ ಮಳೆ ಬಿದ್ದಂತಹ ಸಂದರ್ಭದಲ್ಲಿ ಇದೇ ಪರಿಸ್ಥಿತಿಯಾಗುತ್ತಿದ್ದು ಹಲವು ಬಾರಿ ಅಧಿಕಾರಿಗಳಿಗೆ ಮನವಿ ಮಾಡಿದರೂ ಸ್ಪಂದನೆ ನೀಡುತ್ತಿಲ್ಲ ನಮ್ಮ ಸಮಸ್ಯೆ ಬಗೆಹರಿಸುತ್ತಿಲ್ಲ ಚರಂಡಿಗಳಲ್ಲಿ ನೀರು ನಿಂತಲ್ಲೇ ನಿಂತು ದುರ್ವಾಸನೆಯಿಂದ ಪರದಾಡುವ ಪರಿಸ್ಥಿತಿ ಒಂದು ಕಡೆ ಮತ್ತೆ ಸೊಳ್ಳೆಗಳ ಕಾಟ ಯಥೇಚ್ಛವಾಗಿದ್ದು ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಲ್ಲಿ ಬದುಕುತ್ತಿದ್ದೇವೆ. ಕೂಡಲೇ ಜನಪ್ರತಿನಿಧಿಗಳು ಹಾಗೂ ಪುರಸಭೆ ಅಧಿಕಾರಿಗಳು ಇತ್ತ ಗಮನಹರಿಸಿ ನಮ್ಮ ಸಮಸ್ಯೆ ಬಗೆಹರಿಸಬೇಕು. ಮತ್ತೊರ್ವ ಮಹಿಳೆ ಸ್ಥಳೀಯ ನಿವಾಸಿ ವರಲಕ್ಷ್ಮಿ ರವರು ಮಾತನಾಡಿ ಸುಮಾರು 30 ವರ್ಷಗಳಿಂದ ನಮ್ಮ ಪರಿಸ್ಥಿತಿ ಇದೆ ಆದಿಗೆ ನಮ್ಮ ಸಮಸ್ಯೆಯನ್ನು ಕೇವಲ ಇಲ್ಲದಂತಾಗಿದೆ ಅಧಿಕಾರಿಗಳಿಗೆ ಹಲವು ಬಾರಿ ಮನವಿ ಮಾಡಿದರು ಸಹ ಸ್ವಚ್ಛತೆ ಮಾಡುತ್ತಿಲ್ಲ ಹಾಗೂ ನಮ್ಮ ಸಮಸ್ಯೆ ಬಗೆಹರಿಸುತ್ತಿಲ್ಲವೆಂದು ಆಕ್ರೋಶ ಹೊರಹಾಕಿದ್ದಾರೆ.
